ಸಾಕವ್ವ

ಯಾರನ್ನು ಕೇಳಿದರು ಗೊತ್ತಿಲ್ಲ ಅಂತಾರೆ
ನೆರೆ ಕೆರೆಯವರೆಲ್ಲ ಕೆರೆ ಹತ್ತಿರ ಸೇರ್ಯಾರೆ
ಊರು ಬೀದಿಯಲ್ಲಿ ಸೂತಕದ ವಾತವರಣ
ಕೆರೆ ಏರಿಯ ಮೇಲೆ ಆಗಿದೆ ಮೂವರ ಮರಣ.

ಒಕ್ಕಣನ ಮಗಳು ಸಾಕವ್ವ ಕೆರೆಗೆ ಬಿದ್ದು ಸತ್ತಾಳೆ
ತನ್ನ ಒಡವೆ ಇಬ್ಬರು ಹೆಣ್ಗೂಸನ್ನು ಕರಕೊಂಡು ಹೋಗ್ಯಾಳೆ
ಇರೊ ಒಬ್ಬ ಗಂಡು ಮಗೂನ ಗಂಡನ್ನ ಅನಾಥ ಮಾಡ್ಯಾಳೆ
ತವರಿನವರ ವೆದನೆಯನ್ನು ಇಮ್ಮಡಿ ಮಡ್ಯಾಳೆ

ಮದುವೆಯಾಗಿ ನಾಲ್ಕು ವರುಷ ಆದರು ಗಂಡನ
ಮನೆಯವರ ಕಾಟ ತಪ್ಪಲಿಲ್ಲ, ಅತ್ತೆ ಒಳ್ಳೆಯಾಕೆಯಾದರೇನು
ಮಾವನ ಗಂಡಾಸೆ ಕೊಂದಿತು ಸಾಕವ್ವಳ ಮನಸ್ಸನ್ನ
ಕೊನೆಗೆ ದಾರಿ ತೊರದೆ ಹಿಡಿದಳು ಕೆರೆಯ ದಾರೀನ.

ಒಂದೆ ಗಂಡು ಹೆತ್ತಲ್ಲೆ? ಎರಡು ಹೆಣ್ಣ ಸಾಕುವರ್‍ಯಾರು
ದುಡ್ಡು, ಧವಸ ಧಾನ್ಯ ಏನು ನಿನ್ನ ತವರಿನವರು ಕೊಟ್ಟಾರು
ಎಂದೆಲ್ಲ ಆಕೆಯ ಮಾವ ನಿಂದಿಸಿದ. ತನ್ನ ಹೆಣ್ಗೂಸಗಳಿಗೆ ಇನ್ನರು
ಗತಿ ಎಂದೆನುತ, ತನ್ಮಕ್ಕಳೊಡನೆ ಕೆರೆಗೆ ಹಾರಿದಳು.

ನಮ್ಮ ಜನರಿಗೆ ಇನ್ಯಾರು ಬುದ್ಧಿ ಹೆಳ್ಯಾರು
ಹುಟ್ಟುವ ಕೂಸು ಗಂಡು ಇಲ್ಲ ಹೆಣ್ಣೆಂದು ನಿಶ್ಚಯಿಸುವವರು
ಗಂಡೆ ವಿನ ಹೆಣ್ಣಲ್ಲವೆಂದು. ಅಂಥು ಕೊಂದರು 
ಮೂವರು ಮುಗ್ಧ ಹೆಣ್ಣುಗಳನ್ನ ಸಕ್ಕವ್ವನ ಮಾವನವರು. 

ಸಾಕವ್ವನ ತಿಥಿಗು ಮುನ್ನವೆ ಆಕೆಯ ಗಂಡನಿಗೆ 
ಮತ್ತೊಂದು ಹೆಣ್ಣನು ಕಟ್ಟಿದರು. ಹೆಣ್ಣಿಗೆ 
ಏನು ಬರವೆ? ಆದರೆ ಮದುವೆಗೆ ಬೆಕ್ಕದ ಹೆಣ್ಣು
ಮದುವೆಯ ನಂತರ ಹುಟ್ಟುವ ಮಗು ಆಗಬಾರದ್ಯಾಕೆ ಹೆಣ್ಣು??

                    - ಆವಿನಶ್ ಬ. ಅವರೆಬೀಳು
                     ೨೫.೧೨.೨೦೦೯


Advertisements

2 thoughts on “ಸಾಕವ್ವ

 1. ಅವಿನಾಶ್, ಕವನ ತುಂಬಾ ಚೆನ್ನಾಗಿದೆ. ಮನಸ್ಸು ಕರಗಿಸುವಂತಹ ನಿರೂಪಣೆ. ಇದು ಬಹಳ ಪ್ರಸ್ತುತವಾದ ವಿಷಯ. ನಮ್ಮ ನಾಡಿನ ಎಷ್ಟೋ ಹೆಣ್ಣು ಮಕ್ಕಳು ಹೀಗೆ ಜೀವ ಕಳೆದುಕೊಳ್ಳುವುದು ದುರಾದೃಷ್ಟಕರ. ಇದನ್ನು ತಡೆಯುವಲ್ಲಿ ನಮ್ಮ ಸಮಾಜ ಮತ್ತು ಸರ್ಕಾರ ಕಾರ್ಯಪ್ರವೃತ್ತಿ ಹೊಂದಬೇಕು. ನಿಮ್ಮ ಈ ಕವನ ಈ ದಿಶೆಯಲ್ಲಿ ಒಂದು ಹೆಜ್ಜೆ ಅಂದರೆ ಅತಿಶಯೋಕ್ತಿಯಲ್ಲ !

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s